No title

ಪ್ರಶ್ನೆ ಪುಸ್ತಿಕೆ : ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)

ವಿಷಯ ಸಂಕೇತ: 76

ವರ್ಷನ್‌ ಕೋಡ್‌: A

ಗರಿಷ್ಠ ಸಮಯ : 2ಗಂಟೆಗಳು

ಗರಿಷ್ಠ ಅಂಕಗಳು: 150 (One and half marks for each question)

ಪರೀಕ್ಷೆ ನಡೆದ ದಿನಾಂಕ : 13-04-2016 (2.00 pm to 4.00 pm)

1.ಹೆನ್ರಿ ಫಯೋಲ್ ಸಂಬಂಧಿಸಿರುವುದು ಇದಕ್ಕೆ
 (1)ನಿರ್ವಹಣಾಚರ್ಯೆ ಶಾಲೆ
 (2)ಶಾಸ್ತ್ರೀಯ ನಿರ್ವಹಣಾ ಶಾಲೆ
 (3)ಅನುಭವಿಕ ನಿರ್ವಹಣಾ ಶಾಲೆ
 (4)ನಿರ್ಣಯ ನಿರ್ವಹಣಾ ಶಾಲೆ

CORRECT ANSWER

(2) ಶಾಸ್ತ್ರೀಯ ನಿರ್ವಹಣಾ ಶಾಲೆ


2.ನಿರ್ವಹಣಾ ತತ್ವಗಳಿಗೆ ಇರುವುದು
 (1)ಪರಿಮಿತಿ ಅನ್ವಯ
 (2)ಅಸಂಗತ ಅನ್ವಯ
 (3)ಸಾರ್ವತ್ರಿಕ ಅನ್ವಯ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(3) ಸಾರ್ವತ್ರಿಕ ಅನ್ವಯ


3.ಪ್ರೋಮ್ಸ್ ನ ಪ್ರೇರಣಾ ಸಿದ್ಧಾಂತವನ್ನು ಹೀಗೂ ಸಂಬೋಧಿಸುತ್ತಾರೆ
 (1)ನಿರೀಕ್ಷಣಾ ಸಿದ್ಧಾಂತ
 (2)X ಸಿದ್ಧಾಂತ ಮತ್ತು Y ಸಿದ್ಧಾಂತ
 (3)ಅವಶ್ಯ ಕ್ರಮಾಗತ ಸಿದ್ಧಾಂತ
 (4)ಆರೋಗ್ಯ ವಿಜ್ಞಾನ ಸಿದ್ಧಾಂತ

CORRECT ANSWER

(1) ನಿರೀಕ್ಷಣಾ ಸಿದ್ಧಾಂತ


4.ಕೆಳಗಿನ ಯಾವುದು ಸಮಯಾಧಾರಿತ ಉತ್ತೇಜನ ಯೋಜನೆ ?
 (1)ಗ್ಯಾಂಟ್ಸ್ ನ ಕಾರ್ಯ ಮತ್ತು ಇನಾಮು ಯೋಜನೆ
 (2)ಸಮುದಾಯ ಉತ್ತೇಜಕ ಯೋಜನೆ
 (3)ಲಾಭಾಂಶ ಹಂಚುವಿಕೆ ಯೋಜನೆ
 (4)ಹಾಲ್ಸೆ ಯೋಜನೆ

CORRECT ANSWER

(4) ಹಾಲ್ಸೆ ಯೋಜನೆ


5.ಬಾಡಿಗೆ ರಹಿತ ವಸತಿ ಎನ್ನುವುದು
 (1)ಪರಿಹಾರ
 (2)ಉತ್ತೇಜನ
 (3)ಫ್ರಿಂಜ್ ಲಾಭ
 (4)ವಿಶೇಷ ಸವಲತ್ತು

CORRECT ANSWER

(4) ವಿಶೇಷ ಸವಲತ್ತು


6.ತೆರಿಗೆ ತಪ್ಪಿಸಿಕೊಳ್ಳುವಿಕೆ ಎನ್ನುವುದು
 (1)ಕಾನೂನು ಬಾಹಿರ
 (2)ನೀತಿ ತತ್ವರಹಿತ
 (3)ಕಾನೂನು ಚೌಕಟ್ಟಿನೊಳಗಿನ ಸಂದಾಯ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(3) ಕಾನೂನು ಚೌಕಟ್ಟಿನೊಳಗಿನ ಸಂದಾಯ


7.ಬ್ರೇಕ್ ಈವನ್ ಬಿಂದು ಸೂಚಿಸುವುದು
 (1)ಲಾಭವೂ ಇಲ್ಲ ನಷ್ಟವೂ ಇಲ್ಲ
 (2)ಲಾಭ ಮತ್ತು ನಷ್ಟದ ಏರಿಕೆ
 (3)ಲಾಭ ಮತ್ತು ನಷ್ಟದ ಇಳಿಕೆ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(1) ಲಾಭವೂ ಇಲ್ಲ ನಷ್ಟವೂ ಇಲ್ಲ


8.ಹ್ಯಾಲೋ ಎರರ್ ಪ್ರವೃತ್ತಿಯು, ವ್ಯಕ್ತಿಯ ನಿರ್ವಹಣಾ ಸಾಮರ್ಥ್ಯವನ್ನು ಅಳೆಯುವುದು ಇದರ ಆಧಾರದ ಮೇಲೆ
 (1)ಗುಣಲಕ್ಷಣಗಳಲ್ಲಿನ ಒಂದು ವಿಶೇಷ ಲಕ್ಷಣ
 (2)ತಪ್ಪು ಕಲ್ಪನೆಗಳು
 (3)ಸಾದೃಶ ತಪ್ಪುಗಳು
 (4)ಮನೋವೈಜ್ಞಾನಿಕ ಪ್ರತಿಬಂಧಕಗಳು

CORRECT ANSWER

(1) ಗುಣಲಕ್ಷಣಗಳಲ್ಲಿನ ಒಂದು ವಿಶೇಷ ಲಕ್ಷಣ


9.ಸಂಸ್ಥೆಯ ನಡವಳಿಕೆಯನ್ನು ಪ್ರಭಾವಿಸುವ ಅಂಶಗಳು
 (1)ಜನ ಸಮುದಾಯ
 (2)ಪರಿಸರ
 (3)ತಂತ್ರಜ್ಞಾನ
 (4)ಇವುಗಳಲ್ಲಿ ಎಲ್ಲವೂ

CORRECT ANSWER

(4) ಇವುಗಳಲ್ಲಿ ಎಲ್ಲವೂ


10.'Might is Right' ಉದ್ದೇಶವು
 (1)ಆಟೊಕ್ರಾಟಿಕ್ ಮಾದರಿ
 (2)ಕಸ್ಟೋಡಿಯಲ್ ಮಾದರಿ
 (3)ಸಪೋರ್ಟಿವ್ ಮಾದರಿ
 (4)ಕಾಲೇಜಿಯಲ್ ಮಾದರಿ

CORRECT ANSWER

(1) ಆಟೊಕ್ರಾಟಿಕ್ ಮಾದರಿ


11.ಈ ವಿಧಾನವನ್ನು ವಸ್ತುಗಳ ಅಲ್ಪಾವಧಿ ಮಾರಾಟವನ್ನು ಹೆಚ್ಚಿಸಲು ಬಳಸುತ್ತಾರೆ
 (1)ಜಾಹೀರಾತು
 (2)ಮಾರಾಟ ಉನ್ನತಿ
 (3)ಪ್ರಚಾರ
 (4)ಸಾರ್ವಜನಿಕ ಸಂಪರ್ಕ

CORRECT ANSWER

(2) ಮಾರಾಟ ಉನ್ನತಿ


12.ಲೇಬಲಿಂಗ್ ಮತ್ತು ಪ್ಯಾಕೇಜಿಂಗ್ ಸಂಯೋಜನೆಗೊಂಡಿರುವುದು
 (1)ಬೆಲೆ ಸಂಯೋಜನೆ
 (2)ಉತ್ಪನ್ನ ಸಂಯೋಜನೆ
 (3)ಉನ್ನತಿ ಸಂಯೋಜನೆ
 (4)ಸ್ಥಳ ಸಂಯೋಜನೆ

CORRECT ANSWER

(2) ಉತ್ಪನ್ನ ಸಂಯೋಜನೆ


13.ಬಫರ್ ದಾಸ್ತಾನು (ಸ್ಟಾಕ್) ಎನ್ನುವುದು
 (1)ಪ್ರತ್ಯಕ್ಷ ದಾಸ್ತಾನಿನ ಅರ್ಧಭಾಗ
 (2)ಕ್ರಮಬದ್ಧ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿರುವುದು
 (3)ಕನಿಷ್ಠ ದಾಸ್ತಾನು ಮಟ್ಟಕ್ಕೆ ನಿರ್ದಿಷ್ಟ ದಾಸ್ತಾನು ಮಟ್ಟವು ಇಳಿಯದಂತೆ
 (4)ದಾಸ್ತಾನಿನಲ್ಲಿರುವ ಗರಿಷ್ಠ ಮೊತ್ತ

CORRECT ANSWER

(3) ಕನಿಷ್ಠ ದಾಸ್ತಾನು ಮಟ್ಟಕ್ಕೆ ನಿರ್ದಿಷ್ಟ ದಾಸ್ತಾನು ಮಟ್ಟವು ಇಳಿಯದಂತೆ


14.ದಾಸ್ತಾನು ಸ್ವೀಕರಿಸುವ ಮತ್ತು ಆದೇಶ ನೀಡುವ ಅಂತರವು
 (1)ನಿರ್ದೇಶ ವೇಳೆ
 (2)ಸಾಗಿಸುವ ವೇಳೆ
 (3)ಕೊರತೆ ವೇಳೆ
 (4)ಹೆಚ್ಚುವರಿ ವೇಳೆ

CORRECT ANSWER

(1) ನಿರ್ದೇಶ ವೇಳೆ


15.ಕೆಳಗಿನ ಯಾವುದು ದಾಸ್ತಾನು(ಇನ್ವೆಂಟರಿ)ಅಲ್ಲ?
 (1)ಉಪಕರಣ
 (2)ಕಚ್ಚಾ ವಸ್ತು
 (3)ಅಂತಿಮ ಉತ್ಪನ್ನಗಳು
 (4)ಬಳಕೆಗೆ ಯೋಗ್ಯವಾದ ಸಂಗ್ರಹ

CORRECT ANSWER

(1) ಉಪಕರಣ


16.ವಾಣಿಜ್ಯ ಬ್ಯಾಂಕ್ ಗಳಿಗೆ ಆರ್.ಬಿ.ಐ. ಕೊಡುವ ಹಣದ ಮೇಲಿನ ದರವು
 (1)ತಿರುಗಿಸಿದ (ರಿವರ್ಸ್) ರೆಪೊ ದರ
 (2)ರೆಪೊ ದರ
 (3)ಬ್ಯಾಂಕ್ ದರ
 (4)ಎರವಲು ದರ

CORRECT ANSWER

(2) ರೆಪೊ ದರ


17.ಷೇರುದಾರರ ಗಳಿಕೆಯನ್ನು ಹೆಚ್ಚಿಸಲು ಬಳಸುವ ಹೆಚ್ಚುವರಿ ಋಣ ಬಂಡವಾಳವು
 (1)ಟ್ರೇಡಿಂಗ್ ಆನ್ ಈಕ್ವಿಟಿ
 (2)ಆಪರೇಟಿಂಗ್ ಲೆವರೇಜ್
 (3)ಕಂಬೈನ್ಡ್‌ ಲೆವರೇಜ್
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(1) ಟ್ರೇಡಿಂಗ್ ಆನ್ ಈಕ್ವಿಟಿ


18.ಕೆಳಗಿನ ಯಾವ ಸಾಂಪ್ರದಾಯಿಕ ಪದ್ಧತಿಯನ್ನು ಹೂಡಿಕೆ ಪ್ರಸ್ತಾಪದ ಮೌಲ್ಯಮಾಪನಕ್ಕೆ ಬಳಸಲಾಗುವುದು ?
 (1)ನೆಟ್ ಪ್ರೆಸೆಂಟ್ ವ್ಯಾಲ್ಯೂ ಪದ್ಧತಿ
 (2)ಇಂಟರ್ನಲ್ ರೇಟ್ ಆಫ್ ರಿಟರ್ನ್ ಪದ್ಧತಿ
 (3)ಪ್ರಾಫಿಟೆಬಿಲಿಟಿ ಇಂಡೆಕ್ಸ್ ಪದ್ಧತಿ
 (4)ಅಕೌಂಟಿಂಗ್ ರೇಟ್ ಆಫ್ ರಿಟರ್ನ್ ಪದ್ಧತಿ

CORRECT ANSWER

(4) ಅಕೌಂಟಿಂಗ್ ರೇಟ್ ಆಫ್ ರಿಟರ್ನ್ ಪದ್ಧತಿ


19.ದರ ಬದಲಾವಣೆಯು ಬೇಡಿಕೆಯ ಪ್ರಮಾಣದಲ್ಲಿ ಬದಲಾವಣೆ ತರದಿದ್ದರೆ, ಅಂತಹ ಸ್ಥಿತಿಯು
 (1)ಸರ್ವಥಾ ಸ್ಥಿತಿಸ್ಥಾಪಕವಲ್ಲದ ಬೇಡಿಕೆ
 (2)ಏಕ ಸ್ಥಿತಿಸ್ಥಾಪಕ ಬೇಡಿಕೆ
 (3)ಸರ್ವಥಾ ಸ್ಥಿತಿಸ್ಥಾಪಕ ಬೇಡಿಕೆ
 (4)ಏಕ ಸ್ಥಿತಿಸ್ಥಾಪಕ ಬೇಡಿಕೆಗಿಂತ ಹೆಚ್ಚು

CORRECT ANSWER

(1) ಸರ್ವಥಾ ಸ್ಥಿತಿಸ್ಥಾಪಕವಲ್ಲದ ಬೇಡಿಕೆ


20.ಪಂಥ (wagering) ಒಪ್ಪಂದವು
 (1)ಮಾನ್ಯ
 (2)ಶೂನ್ಯ
 (3)ನಿರರ್ಥಕ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(2) ಶೂನ್ಯ


21.ವಚನ ಪತ್ರದೊಳಗಿನ ಒಟ್ಟು ವ್ಯಕ್ತಿಗಳು
 (1)ನಾಲ್ಕು
 (2)ಮೂರು
 (3)ಎರಡು
 (4)ಐದು

CORRECT ANSWER

(3) ಎರಡು


22.ಯೋಗ್ಯ ಮತ್ತು ಉಪಕೃತವು (ಹಕ್ಕು ಮತ್ತು ಆಭಾರಗಳು) ವ್ಯಕ್ತಿಗಳ ನಡುವಿನ ಒಪ್ಪಂದದಿಂದಾಗುವುದಲ್ಲ, ಅದು ಕಾನೂನಿನ ಕ್ರಿಯೆಯಿಂದ, ಅಂತಹ ಒಪ್ಪಂದವನ್ನು ___________ ಎಂದು ಕರೆಯುತ್ತಾರೆ.
 (1)ವ್ಯಕ್ತ ಒಪ್ಪಂದ
 (2)ಇ.ಕಾಮ್ ಒಪ್ಪಂದ
 (3)ಮೇಲ್ನೋಟಕ್ಕೆ (Quasi) ಒಪ್ಪಂದ
 (4)ಪರೋಕ್ಷ (Implied) ಒಪ್ಪಂದ

CORRECT ANSWER

(3) ಮೇಲ್ನೋಟಕ್ಕೆ (Quasi) ಒಪ್ಪಂದ


23.ಭರವಸೆ ನೀಡಲೋಸುಗ ಕೈಗೊಳ್ಳುವ, ಒಟ್ಟು ಯೋಜನಾ ಕಾರ್ಯ ನಿರ್ವಹಣೆಯ ಮೌಲ್ಯಮಾಪನದ ಪ್ರಕ್ರಿಯೆಯನ್ನು ___________ ಎಂದು ಕರೆಯುತ್ತಾರೆ.
 (1)ಗುಣಮಟ್ಟ ವಾಗ್ದಾನ
 (2)ಗುಣಮಟ್ಟ ಯೋಜನೆ
 (3)ಗುಣಮಟ್ಟ ಹತೋಟಿ
 (4)ಗುಣಮಟ್ಟ ಲೆಕ್ಕ ಪರಿಶೋಧನೆ

CORRECT ANSWER

(1) ಗುಣಮಟ್ಟ ವಾಗ್ದಾನ


24.ಆದರ್ಶ ತ್ವರಿತ (ಪ್ರವಹಿಸುವ) ಅನುಪಾತವು
 (1)2 : 1
 (2)1 : 1
 (3)3 : 1
 (4)5 : 1

CORRECT ANSWER

(2) 1 : 1


25.ಯಾವ ರೀತಿಯ ಇ-ವಾಣಿಜ್ಯವು ಪರಸ್ಪರ ಗ್ರಾಹಕ ವ್ಯವಹಾರವನ್ನು ಅಭಿವ್ಯಕ್ತಿಸುತ್ತದೆ?
 (1)B2B
 (2)B2C
 (3)C2C
 (4)C2B

CORRECT ANSWER

(3) C2C


26.ಬಹುಸ್ಪರ್ಧಾತ್ಮಕ ಸಂಸ್ಥೆಗಳ ಸಣ್ಣ ಸ್ಥಿತಿಯು
 (1)ಏಕಸ್ವಾಮ್ಯ
 (2)ದ್ವಿಸ್ವಾಮ್ಯ
 (3)ಪರಿಪೂರ್ಣ ಸ್ಪರ್ಧೆ
 (4)ಅಲ್ಪಸಂಖ್ಯಾಸ್ವಾಮ್ಯ

CORRECT ANSWER

(4) ಅಲ್ಪಸಂಖ್ಯಾಸ್ವಾಮ್ಯ


27.ಶ್ರೀ ಎಕ್ಸ್ ರವರು ನಗದಿನಲ್ಲಿ ವ್ಯವಹಾರ ಶುರು ಮಾಡಿದರೆ ಯಾವುದನ್ನು ಡೆಬಿಟ್ ಮಾಡಲಾಗುತ್ತದೆ ?
 (1)ಬಂಡವಾಳ ಖಾತೆ
 (2)ನಗದು ಖಾತೆ
 (3)ಸೆಳೆತ ಖಾತೆ
 (4)ಮಾಲೀಕನ ಖಾತೆ

CORRECT ANSWER

(2) ನಗದು ಖಾತೆ


28.ಲೆಕ್ಕ ವರ್ಷದಲ್ಲಿ ಕಟ್ಟಿದ ಮುಂಗಡ ಬಾಡಿಗೆಯು
 (1)ಖರ್ಚು
 (2)ಆದಾಯ
 (3)ಆಸ್ತಿ
 (4)ಹೊಣೆ

CORRECT ANSWER

(3) ಆಸ್ತಿ


29.ಸಂಸ್ಥೆಯ ಒಡೆತನವನ್ನು ಪ್ರಕಟಪಡಿಸುವ ಹಣಕಾಸಿನ ಪಟ್ಟಿ ಯಾವುದು ?
 (1)ಆದಾಯ ಪಟ್ಟಿ
 (2)ಆಢಾವೆ ಪಟ್ಟಿ (Balance sheet)
 (3)ಗಳಿಸಿದ ಆದಾಯ ಪಟ್ಟಿ
 (4)ನಗದು ಹರಿವು ಪಟ್ಟಿ

CORRECT ANSWER

(2) ಆಢಾವೆ ಪಟ್ಟಿ (Balance sheet)


30.ಕೆಳಗಿನ ಯಾವುದು ಅಮೂರ್ತ ಆಸ್ತಿ ಅಲ್ಲ ?
 (1)ಪೇಟೆಂಟ್
 (2)ಭೂಮಿ
 (3)ಟ್ರೇಡ್ ಮಾರ್ಕ್
 (4)ಕಾಪಿರೈಟ್

CORRECT ANSWER

(2) ಭೂಮಿ


31.ಸವಕಳಿ ಎಂದರೆ
 (1)ಆಸ್ತಿ ನಷ್ಟ
 (2)ಬಳಕೆ (ಕಡಿತ ಮತ್ತು ಸವೆತ) ನಷ್ಟ
 (3)ವ್ಯವಹಾರದ ವೆಚ್ಚ
 (4)ಆಸ್ತಿ ಮೌಲ್ಯದಲ್ಲಿನ ಇಳಿಕೆ

CORRECT ANSWER

(4) ಆಸ್ತಿ ಮೌಲ್ಯದಲ್ಲಿನ ಇಳಿಕೆ


32.ಈ ಕೆಳಗಿನ ಯಾವ ಅಂಶ ಪರೋಕ್ಷ ತೆರಿಗೆಯ ಗುಣಲಕ್ಷಣವಾಗಿಲ್ಲ ?
 (1)ಅನುಕೂಲ
 (2)ತೆರಿಗೆ ತಪ್ಪಿಸುವಿಕೆ ಕಷ್ಟ
 (3)ಬಡವರಿಗೆ ಹಿತ
 (4)ಅರ್ಥನೀತಿಗೆ ಪರಿಣಾಮಕಾರಿ ಸಾಧನ

CORRECT ANSWER

(3) ಬಡವರಿಗೆ ಹಿತ


33.ಹೂಡು ಕರ್ನಾಟಕ 2016 ರ ಒಟ್ಟು ಜಾಗತಿಕ ಪಾಲುದಾರರ ಸಂಖ್ಯೆಯು
 (1)ಐದು
 (2)ಆರು
 (3)ಏಳು
 (4)ಎಂಟು

CORRECT ANSWER

(3) ಏಳು


34.'ಶಿಶು' 'ಕಿಶೋರ್' ಮತ್ತು 'ತರುಣ್' ಯಾವುದರ ಉತ್ಪನ್ನಗಳು ?
 (1)ಎಲ್‌.ಐ.ಸಿ.
 (2)ಯು.ಟಿ.ಐ.
 (3)ನಬಾರ್ಡ್
 (4)ಮುದ್ರಾ

CORRECT ANSWER

(4) ಮುದ್ರಾ


35.ವ್ಯಾಪಾರಿ ಸಂಸ್ಥೆಯು ಬಹುಕಾಲ ಬಾಳುತ್ತದೆ ಎಂಬ ಕಲ್ಪನೆಯಿಂದ ವ್ಯವಹಾರಗಳನ್ನು ದಾಖಲಿಸಲಾಗಿದೆ. ಈ ಪರಿಕಲ್ಪನೆಯನ್ನು ಏನೆಂದು ಕರೆಯುತ್ತಾರೆ ?
 (1)ಹಣದ ಅಳತೆ ಪರಿಕಲ್ಪನೆ
 (2)ವ್ಯವಹಾರ ಅಸ್ತಿತ್ವ ಪರಿಕಲ್ಪನೆ
 (3)ಪ್ರಗತಿಪರ ಸಂಸ್ಥೆ ಪರಿಕಲ್ಪನೆ
 (4)ಐತಿಹಾಸಿಕ ವೆಚ್ಚ ಪರಿಕಲ್ಪನೆ

CORRECT ANSWER

(3) ಪ್ರಗತಿಪರ ಸಂಸ್ಥೆ ಪರಿಕಲ್ಪನೆ


36.ಭೂಮಿ ಮತ್ತು ಕಟ್ಟಡದ ಖರೀದಿ ವೆಚ್ಚವನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು.
 (1)ರೆವೆನ್ಯೂ ವೆಚ್ಚ
 (2)ಬಂಡವಾಳ ವೆಚ್ಚ
 (3)ರೆವೆನ್ಯೂ ನಷ್ಟ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(2) ಬಂಡವಾಳ ವೆಚ್ಚ


37.ಈ ಕೆಳಕಂಡ ಯಾವ ಅಂಶವನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿ ನಮೂದಿಸಲಾಗುವುದಿಲ್ಲ ?
 (1)ವೇತನಗಳು
 (2)ಸವಕಳಿ
 (3)ಮುದ್ರಣ ಮತ್ತು ಲೇಖನ ಸಾಮಗ್ರಿ
 (4)ಅಂತಿಮ ದಾಸ್ತಾನು

CORRECT ANSWER

(4) ಅಂತಿಮ ದಾಸ್ತಾನು


38.ವ್ಯತಿರಿಕ್ತ ನಮೂದನ್ನು ಈ ಕೆಳಕಂಡ ಯಾವ ರೀತಿಯ ನಗದು ಪುಸ್ತಕದಲ್ಲಿ ದಾಖಲಿಸಲಾಗುತ್ತದೆ ?
 (1)ಏಕ ಅಂಕಣದ ನಗದು ಪುಸ್ತಕ
 (2)ಮೂರು ಅಂಕಣದ ನಗದು ಪುಸ್ತಕ
 (3)ಎರಡು ಅಂಕಣದ ನಗದು ಪುಸ್ತಕ
 (4)ಚಿಲ್ಲರೆ ನಗದು ಪುಸ್ತಕ

CORRECT ANSWER

(2) ಮೂರು ಅಂಕಣದ ನಗದು ಪುಸ್ತಕ


39.ಯಾವ ಭಾರತೀಯ ಲೆಕ್ಕ ಮಾನಕವು ಆಸ್ತಿಯ ಸವಕಳಿಗೆ ಮಾನಕ ನೀಡುತ್ತದೆ ?
 (1)IAS-4
 (2)IAS-6
 (3)IAS-8
 (4)IAS-1

CORRECT ANSWER

(2) IAS-6


40.ಪಾಲುದಾರಿಕಾ ಸಂಸ್ಥೆಯಲ್ಲಿ, ಹೊಸ ಪಾಲುದಾರನ ಸೇರ್ಪಡೆಯಾಗುವಾಗ ಯಾವ ಅನುಪಾತವನ್ನು ಕಂಡುಹಿಡಿಯ ಲಾಗುತ್ತದೆ ?
 (1)ತ್ಯಾಗದ ಅನುಪಾತ
 (2)ಗಳಿಕೆಯ ಅನುಪಾತ
 (3)ಬಂಡವಾಳ ಅನುಪಾತ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(1) ತ್ಯಾಗದ ಅನುಪಾತ


41.ಉಚಿತ ನಮೂನೆ (samples) ವಸ್ತುಗಳ ಹಂಚಿಕೆಯನ್ನು ಈ ಕೆಳಕಂಡ ಯಾವ ಖಾತೆಯಲ್ಲಿ ನಮೂದಿಸಲಾಗುತ್ತದೆ ?
 (1)ವ್ಯಾಪಾರ ಖಾತೆ
 (2)ಲಾಭ ಮತ್ತು ನಷ್ಟದ ಹಂಚಿಕೆ ಖಾತೆ
 (3)ಲಾಭ ಮತ್ತು ನಷ್ಟದ ಖಾತೆ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(3) ಲಾಭ ಮತ್ತು ನಷ್ಟದ ಖಾತೆ


42.ಬೆಂಕಿಯ ಅಪಘಾತದಲ್ಲಿ ಕಂಪನಿಯು ತನ್ನ ಹಣಕಾಸು ದಾಖಲೆಗಳನ್ನು ಕಳೆದು ಕೊಂಡಾಗ ಅಂತಿಮ ದಾಸ್ತಾನು ಶಿಲ್ಕನ್ನು ಕಂಡು ಹಿಡಿಯಲು ಈ ಕೆಳಕಂಡ ಖಾತೆಗಳಲ್ಲಿ ಯಾವ ಖಾತೆಯನ್ನು ತೆರೆಯಲಾಗುತ್ತದೆ ?
 (1)ಜ್ಞಾಪನ ವ್ಯಾಪಾರ ಖಾತೆ
 (2)ವ್ಯಾಪಾರ ಖಾತೆ
 (3)ಲಾಭ ಮತ್ತು ನಷ್ಟದ ಖಾತೆ
 (4)ಲಾಭ ಮತ್ತು ನಷ್ಟದ ಹಂಚಿಕೆ ಖಾತೆ

CORRECT ANSWER

(1) ಜ್ಞಾಪನ ವ್ಯಾಪಾರ ಖಾತೆ


43.ಯಾವ ಸಂಸ್ಥೆಯು, ತನ್ನ ಅಂತಿಮ ಲೆಕ್ಕ ಪತ್ರಗಳನ್ನು ತಯಾರಿಸುವಾಗ ಲಾಭ ಮತ್ತು ನಷ್ಟದ ಖಾತೆಯ ಬದಲಾಗಿ ಆದಾಯ ಮತ್ತು ವೆಚ್ಚದ ಖಾತೆಯನ್ನು ತಯಾರಿಸುತ್ತದೆ ?
 (1)ಏಕಸ್ವಾಮ್ಯ ವ್ಯಾಪಾರಿ ಸಂಸ್ಥೆ
 (2)ಪಾಲುದಾರಿಕಾ ಸಂಸ್ಥೆ
 (3)ಜಾಯಿಂಟ್ ಸ್ಟಾಕ್ ಕಂಪನಿ (ಕೂಡು ಬಂಡವಾಳ ಸಂಸ್ಥೆ)
 (4)ವ್ಯಾಪಾರೇತರ ಸಂಸ್ಥೆ

CORRECT ANSWER

(4) ವ್ಯಾಪಾರೇತರ ಸಂಸ್ಥೆ


44.ಪಾಲುದಾರಿಕಾ ಸಂಸ್ಥೆಯು, ಪಾಲುದಾರಿಕಾ ಕಾಯಿದೆ 1936 ರ ಪ್ರಕಾರ ನೋಂದಣಿ ಯಾಗಿದ್ದಲ್ಲಿ ಪಾಲುದಾರನ ಹೊಣೆಗಾರಿಕೆಯು ಈ ರೀತಿ ಇರುತ್ತದೆ.
 (1)ಅನಿಯಮಿತ ಹೊಣೆಗಾರಿಕೆ
 (2)ಹೊಣೆಗಾರಿಕೆಯೇ ಇಲ್ಲ
 (3)ಪರಿಮಿತ ಹೊಣೆಗಾರಿಕೆ
 (4)ಇವುಗಳಲ್ಲಿ ಯಾವುದೂ ಅಲ್ಲ

CORRECT ANSWER

(1) ಅನಿಯಮಿತ ಹೊಣೆಗಾರಿಕೆ


45.ಹಣಕಾಸು ನಿರ್ವಹಣಾ ಕಾರ್ಯಗಳು ಈ ಕೆಳಕಂಡ ನಿರ್ಧಾರಗಳನ್ನು ಕೈಗೊಳ್ಳುವುದಾಗಿರುತ್ತದೆ.
 (1)ಹೂಡಿಕೆ ನಿರ್ಧಾರ
 (2)ಹಣಕಾಸು ಹೊಂದಿಸುವ ನಿರ್ಧಾರ
 (3)ಲಾಭಾಂಶ ನೀತಿಗಳ ನಿರ್ಧಾರ
 (4)ಇವುಗಳಲ್ಲಿ ಎಲ್ಲವೂ

CORRECT ANSWER

(4) ಇವುಗಳಲ್ಲಿ ಎಲ್ಲವೂ


46.ಆದ್ಯತಾ ಷೇರುಗಳು ಮತ್ತು ಸಾಲಪತ್ರಗಳ ಮುಖಾಂತರ ಪರಿಯೋಜನೆಗೆ ಹಣಕಾಸು ಒದಗಿಸುವುದನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು.
 (1)ಅಲ್ಪಾವಧಿ ಹಣಕಾಸು ಯೋಜನೆ
 (2)ದೀರ್ಘಾವಧಿ ಹಣಕಾಸು ಯೋಜನೆ
 (3)ಆಯವ್ಯಯ
 (4)ಸರ್ಕಾರಿ ಯೋಜನೆ

CORRECT ANSWER

(2) ದೀರ್ಘಾವಧಿ ಹಣಕಾಸು ಯೋಜನೆ


47.₹ 25,000 ವನ್ನು ಶೇ. 11 ರಂತೆ 3 ವರ್ಷಗಳ ಕಾಲ ಹೂಡಿಕೆ ಮಾಡಿದಲ್ಲಿ 3 ವರ್ಷದ ನಂತರದ ಭವಿಷ್ಯದಲ್ಲಿ ಒಟ್ಟು ಎಷ್ಟು ಮೊತ್ತವಾಗುತ್ತದೆ ?
 (1)35,000
 (2)34,190
 (3)34,500
 (4)38,000

CORRECT ANSWER

(2) 34,190


48.ಸಾಮಾನ್ಯ ಷೇರುದಾರರಿಗೆ ಗರಿಷ್ಠ ವರಮಾನ ಬರುವಂತೆ, ಹಣಕಾಸು ಮ್ಯಾನೇಜರ್ ಗೆ ಮಾರ್ಗದರ್ಶನ ನೀಡುವ ಲೆವರೇಜ್ ಯಾವುದು ?
 (1)ಮಿಶ್ರ ಲೆವರೇಜ್
 (2)ಕಾರ್ಯಾಚರಣೆ ಲೆವರೇಜ್
 (3)ಹಣಕಾಸು ಲೆವರೇಜ್
 (4)ಇವುಗಳಲ್ಲಿ ಯಾವುದೂ ಇಲ್ಲ

CORRECT ANSWER

(3) ಹಣಕಾಸು ಲೆವರೇಜ್


Post a Comment

Previous Post Next Post

Ad 1

Ad2

Telegram Group Join Now
WhatsApp Group Join Now

49.ಕಾರ್ಯಾಚರಣೆ ಲೆವರೇಜ್ ಕಂಡುಹಿಡಿಯಲು ಈ ಕೆಳಕಂಡ ಯಾವ ಸೂತ್ರವನ್ನು ಬಳಸಲಾಗುತ್ತದೆ ?