ಕರ್ನಾಟಕದ ಚಿನ್ನದ ಗಣಿಗಳು
Gold Mines of Karnataka
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
ಚಿನ್ನವು ಅಪರೂಪದ ಹೊಳೆಯುವ ಮತ್ತು ತನ್ಯತೆ ಕುಠ್ಯತೆ ಹೂಂದಿರುವ ಹೆಚ್ಚು ಬಾಳಿಕೆ ಬರುವ ಹಳದಿ ಲೋಹವಾಗಿದೆ. ಇದನ್ನು ಆಭರಣಗಳನ್ನು ತಯಾರಿಸಲು ಬಳಸುತ್ತಾರೆ. ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಆದ್ದರಿಂದ ಇದನ್ನು ಚಿನ್ನದ ನಾಡು ಎಂದು ಕರೆಯಲಾಗುತ್ತದೆ. 1880 ರಲ್ಲಿ ಜಾನ್ ಟೇಲರ್ ಎಂಬುವನು ಕೋಲಾರ ಜಿಲ್ಲೆಯಲ್ಲಿ ಚಿನ್ನದ ಗಣಿಗಾರಿಕೆಯನ್ನು ಪ್ರಾರಂಭ ಮಾಡಿದನು. 1885ರಲ್ಲಿ ಕೆ.ಜಿ.ಎಫ್ ನಗರವು ಅಸ್ತಿತ್ವಕ್ಕೆ ಬರಲು ಕಾರಣವಾಯಿತು.
♣ ಕರ್ನಾಟಕದ ಪ್ರಮುಖ ಚಿನ್ನದ ಗಣಿಗಳು
1. ಕೋಲಾರದ ಕೆ.ಜಿ.ಎಫ್ (ಈಗ ಈ ಗಣಿಗಾರಿಕೆ ಸ್ಥಗಿತಗೊಂಡಿದೆ.)
2. ನಂದಿ ದುರ್ಗ
3. ಉರಿಗಾಂ
4. ಚಾಂಪಿಯನ್ ರೀಫ್ (ಅತ್ಯಂತ ಆಳವಾದ ಚಿನ್ನದ ಗಣಿಯಾಗಿದೆ 3217 ಮೀ.)
5. ಮೈಸೂರು ಗಣಿ
6. ರಾಯಚೂರಿನ ಹಟ್ಟಿ ಚಿನ್ನದ ಗಣಿ
7. ಗದಗ ಜಿಲ್ಲೆಯ ಮುಳಗುಂದ
8. ಕಪ್ಪತಗುಡ್ಡ
9. ಹಾಸನ ಜಿಲ್ಲೆಯ ಕೆಂಪಿನ ಕೋಟೆ etc
♣ ಪ್ರಸ್ತುತ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಭಾರತದ ಅತಿ ದೊಡ್ಡ ಚಿನ್ನದ ಗಣಿಯಾಗಿದೆ. ಸಧ್ಯ ಹಟ್ಟಿ ಚಿನ್ನದ ಗಣಿ ದೇಶದಲ್ಲಿ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುತ್ತಿದೆ.
★ ತುಮಕೂರು ಜಿಲ್ಲೆಯ ಬೆಳ್ಳಾರ, ಶಿರಾ ಸಮೀಪ ಇರುವ ಅಜ್ಜನ ಹಳ್ಳಿಯಲ್ಲೂ ಚಿನ್ನದ ಅದಿರನ್ನು ಉತ್ಪಾದಿಸಲಾಗುತ್ತಿತ್ತು. ( ಈಗ ಗಣಿಗಾರಿಕೆ ಸ್ಥಗಿತಗೊಂಡಿದೆ.)